Index   ವಚನ - 114    Search  
 
ನಾನೆಲ್ಲಿಂದ ಬಂದೆ? ಎನಗೆ ಈ ದೇಹ ಬಂದ ಪರಿ ಯಾವುದು? ಇನ್ನು ಮುಂದೆ ಎಯ್ದುವ ಗತಿ ಯಾವುದು? ಎಂಬ ನಿತ್ಯಾನಿತ್ಯವಿಚಾರ ಹುಟ್ಟದವರಿಗೆ ಎಂದೆಂದಿಗು ಬಳಲಿಕೆ ಬಿಡದು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ನೀವು ಬರಿಸಿದ ಭವಾಂತರದಲ್ಲಿ ಬರುತಿಹರಾಗಿ, ನಾನು ಕಂಡು ಮರಗುತಿದ್ದೆನು.