Index   ವಚನ - 113    Search  
 
ಜಾಳು ಮಾತೆಂದಡೆ ನಲಿದು ನಲಿದು ನುಡಿವರು. ಕಾಳುಗೆಲಸವೆಂದಡೆ ನಲಿದು ನಲಿದು ಮಾಡುವರು. ಶ್ರೀಗುರು ಸೇವೆಯೆಂದಡೆ, ನಿತ್ಯ ಲಿಂಗಾರ್ಚನೆಯೆಂದಡೆ, ಮತ್ತೆ ಪಂಚಾಕ್ಷರಿ ಜಪವೆಂದಡೆ, ಅಳಲುವರು, ಬಳಲುವರು. ಇಂತಪ್ಪ ದುರುಳರಿಗೆ, ದುಃಖವೆ ಪ್ರಾಪ್ತಿಯಲ್ಲದೆ, ನಿಜಸುಖವೆಂಬುದಿಲ್ಲ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು, ಅವರ ಬಾರದ ಭವದಲ್ಲಿ ಬರಿಸದೆ ಮಾಣ್ಬನೆ?