Index   ವಚನ - 118    Search  
 
ಸುಖ ದುಃಖ ಮೋಹದೊಡಲುಗೊಂಡು ಹುಟ್ಟಿತ್ತೀ ಜಗವೆಲ್ಲ. ಆ ಜಗದಂತೆ ಶಿವಭಕ್ತನಾದಡೆ, ಅದರ ಕುಂದೇನು? ತನ್ನ ಹೆಚ್ಚೇನು? ಜಗವು ಮಾಯೆಯಂತೆ:ಅದ ಬೇರೆ ಮಾಡೆ. ತಾ ಶಿವನಂತೆ ಇದ್ದವನ ಇರವು ಶುದ್ಧ. ಜಗದೀಶನವರೊಳಗೆ ತೆರಹಿಲ್ಲದಿಪ್ಪ:ಇದು ಸತ್ಯ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.