Index   ವಚನ - 124    Search  
 
ಶಿವಭಕ್ತರಾದವರು, ಅಂಗದ ಮೇಲಣ ಲಿಂಗಕ್ಕೆ, ಅನ್ನ ಉದಕ ಗಂಧ ಪುಷ್ಪ ತಾಂಬೂಲ ವಸ್ತ್ರ ಮೊದಲಾದವ ಕೊಟ್ಟು ಕೊಳಲೇಬೇಕು. 'ರುದ್ರಭುಕ್ತಾನ್ನಂ ಭಕ್ಷಯೇತ್ ರುದ್ರಪೀತಂ ಜಲಂ ಪಿಬೇತ್ ರುದ್ರಾಘ್ರಾತಂ ಸದಾ ಜಿಘ್ರೇತ್' -ಎಂದುದಾಗಿ, ಶಿವಂಗೆ ಕೊಡದೆ ಕೊಂಡದೆ ಅದು ಭಕ್ತಿಪಥವಲ್ಲ. ಆತಂಗೆ ಪ್ರಸಾದವಿಲ್ಲ. ವಿಶ್ವಾಸವಿಲ್ಲದವರ ಶಿವನೊಲ್ಲನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.