Index   ವಚನ - 132    Search  
 
ಎಲೆ ಶಿವನೆ, ನಾ ನಿಮ್ಮನೊಂದೆ ಬೇಡಿಕೊಂಬೆನು: ನಿಮ್ಮ ಶರಣರ ಮೂರ್ತಿಯ ಕಂಡಡೆ, ನೀವೆಂದೆ ಕಾಬಂತೆ ಮಾಡಯ್ಯ. ನಿಮ್ಮ ಶರಣರ ನುಡಿಯ ಕೇಳಿದಡೆ, ನಿಮ್ಮ ನುಡಿಯೆಂದು ನಂಬುವಂತೆ ಮಾಡಯ್ಯ. ನಿಮ್ಮ ಶರಣರ ಸುಖವೆಲ್ಲ, ನಿಮ್ಮ ಸುಖವೆಂದು ತಿಳಿವಂತೆ ಮಾಡಯ್ಯ. ನಿಮ್ಮ ಶರಣರಾಡಿದ್ದೆಲ್ಲ, ನಿಮ್ಮ ಲೀಲೆಯೆಂದರಿವಂತೆ ಮಾಡಯ್ಯಾ ಎನಗೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.