Index   ವಚನ - 131    Search  
 
ನಾನು ಭಕ್ತನಪ್ಪೆನಯ್ಯ ನಿಮ್ಮ ಶ್ರೀ ಚರಣಸೇವಕನಾಗಿ, ನಾನು ಯುಕ್ತನಪ್ಪೆನಯ್ಯ `ಯತ್ರ ಮಾಹೇಶ್ವರಸ್ತತ್ರ ಶಿವಃ' ಎಂಬ ವಿಶ್ವಾಸದನುಭಾವಿಯಾಗಿ. ನಾನು ಮುಕ್ತನಪ್ಪೆನಯ್ಯ ಮನ ಪ್ರಾಣ ನಿಮ್ಮಲ್ಲಿ ನಿಂದು ನಾನೆಂಬುದಿಲ್ಲವಾಗಿ. ಇಂತು ತನುವಿನಲ್ಲಿ ಹೊರೆಯಿಲ್ಲದೆ, ಮನದಲ್ಲಿ ವ್ಯಾಕುಲವಿಲ್ಲದೆ, ಪ್ರಾಣದಲ್ಲಿ ಹಮ್ಮಿಲ್ಲದೆ, ತನು ಮನ ಪ್ರಾಣ ನಿಮ್ಮಲ್ಲಿ ಸಂದಿಪ್ಪ ನಿಚ್ಚಟ ಭಕ್ತನಾಗಿಪ್ಪೆನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ ನಿಮ್ಮಲ್ಲಿ.