Index   ವಚನ - 138    Search  
 
ಗುರುದೇವನೆ ಮಹಾದೇವನು, ಗುರುದೇವನೇ ಪರಶಿವನು. ನಿಃಕಲಪರವಸ್ತು ಗುರುವಾಗಿ, ಸಕಲರೂಪಾದ ನೋಡಯ್ಯ. ಮಹಾಜ್ಞಾನನಿಧಿ, ಶಿಷ್ಯಾನುಗ್ರಹ ಕಾರಣವಾಗಿ. ``ಯಶ್ಯಿವಸ್ಸಗುರುರ್ಜ್ಞೇಯೋ ಯೋಗ ಗುರುಸ್ಸಶ್ಯಿವಃ ಸ್ಮೃತಃ' ಎಂದುದಾಗಿ ಪರಶಿವ ತಾನೆ ಗುರುರೂಪಾಗಿ ವರ್ತಿಸುತ್ತಿದ್ದ ನೋಡಯ್ಯ, ಮಹಾಕರುಣಾಮೂರ್ತಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.