Index   ವಚನ - 158    Search  
 
ಗುರು ಲಿಂಗ ಜಂಗಮ ಪ್ರಸಾದವೆಂಬ ಚತುರ್ವಿಧದ ಏಕರಸವೇ ಪಾದೋದಕವೆನಿಸುವುದು. ಆ ಪಾದೋದಕ ರೂಪಾದಾತನೇ ಭಕ್ತನು. ಆ ಭಕ್ತನೊಳಗೆ ಅಡಗಿ ತೋರುವ ಗುರು ಲಿಂಗ ಜಂಗಮ ಪ್ರಸಾದಕ್ಕೆ ಆ ಭಕ್ತನೆ ಆಧಾರ. ಆ ಭಕ್ತಂಗೆ ಚತುರ್ವಿಧವೊಂದಾದ ಲಿಂಗವೇ ಆಧಾರ. ಇಂತು ಒಂದನೊಂದು ಬಿಡದೆ ಒಂದಕೊಂದಾಧಾರ ಆಧೇಯವಾಗಿಹುದೆ ಲಿಂಗಭಕ್ತನ ಇರವು ತಾನೆ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.