Index   ವಚನ - 187    Search  
 
ಶಿವನು ಸರ್ವಗತನಾಗಿ ಎಲ್ಲಿಯು ಇಹನೆಂದಡೆ ಎಲ್ಲವು ಶಿವನೇ? ಅಲ್ಲ. ಮತ್ತೆಲ್ಲಿಹೆನೆಂದಡೆ: ನಿರ್ಮಲಚಿತ್ತರಾದ ಸದ್ವಿವೇಕಿಗಳಲ್ಲಿ, ನಿತ್ಯ ಸಂತೋಷಿಗಳಾದ ನಿರಾಶಾಭರಿತರಲ್ಲಿ. "ಯಾ ತೇ ರುದ್ರ ಶಿವಾತನೂರಘೋರಾಪಾಪಕಾಶಿನೀ..." ಎಂದುದಾಗಿ, ನಿರ್ಮಲ ಪರಮ ಮಾಹೇಶ್ವರರ ಹೃದಯದಲ್ಲಿ ಅತಿಪ್ರೇಮದಿಂದಿಹನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.