Index   ವಚನ - 189    Search  
 
ತನುವಿಂಗೆ ತನುವಾಗಿ, ಮನಕ್ಕೆ ಮನವಾಗಿ, ಅರಿವಿಂಗೆ ಅರಿವಾಗಿ, ತೆರಹಿಲ್ಲದಿರ್ದ ಘನವ, ಒಮ್ಮೆ ಆಹ್ವಾನಿಸಿ ನೆನೆದು, ಒಮ್ಮೆ ವಿಸರ್ಜಿಸಿ ಬಿಟ್ಟಿಹೆನೆಂದಡೆ ತನ್ನಳವೇ? ಪರಿಪೂರ್ಣ ಪರಶಿವನು, ಆರಾರ ಭಾವಕಲ್ಪನೆ ಹೇಗೆ ಹೇಗೆ ತೋರಿತೆಂದಡೆ ತೋರಿದಂತೆ, ಖಂಡಿತನಹನೇ ಆಗಲರಿಯನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.