ಅನುಭಾವ ನೆಲೆಗೊಂಡಲ್ಲದೆ,
ಅಂಗ ಲಿಂಗದ ಹೊಲಬನರಿಯಬಾರದು.
ಅನುಭಾವ ನೆಲೆಗೊಂಡಲ್ಲದೆ, ಭಕ್ತಿ ವಿರಕ್ತಿ ನೆಲೆಗೊಳ್ಳದು.
ಅನುಭಾವ ನೆಲೆಗೊಂಡಲ್ಲದೆ,
ಜ್ಞಾನ ಸುಜ್ಞಾನದ ನೆಲೆಯ ಕಾಣಬಾರದು.
ಅನುಭಾವ ನೆಲೆಗೊಂಡಲ್ಲದೆ,
ತಾನು ಇದಿರೆಂಬುದ ತಿಳಿದು ತಾನು ತಾನಾಗಬಾರದು.
ಇದು ಕಾರಣ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮ ಅನುಭಾವದ ಅನುವಿನಲ್ಲಿಪ್ಪವ ನೀವೆಂದೆ ಕಾಂಬೆನು.