ಭೂತಪಂಚಕಕಾಯವ ಕಳೆದು
ಗುರು ಶಿವಮಂತ್ರಕಾಯವ ಮಾಡಿ ಶಿವಜಾತನಾದ ಬಳಿಕ
ಜಾತಿಸೂಚಕ ವರ್ಣಾಶ್ರಮವಿಲ್ಲವಾಗಿ, ದೇಹಾಭಿಮಾನವಿಲ್ಲ.
ದೇಹಾಭಿಮಾನವಿಲ್ಲವಾಗಿ ಜಂಗಮದಲೈಕ್ಯನು.
ಆ ಸಮ್ಯಜ್ಞಾನ ಜಂಗಮ ಲಿಂಗೈಕ್ಯಂಗೆ
ಲಿಂಗಾಚಾರವಲ್ಲದೆ ಲೋಕಾಚಾರವಿಲ್ಲ.
ಆತಂಗೆ ಸರ್ವವೂ ಲಿಂಗಮಯವಾಗಿ
ತೋರುತ್ತಿಹುದಾಗಿ ಆ ಮಹಾತ್ಮನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಕೂಡಿ ವರ್ತಿಸುತ್ತಿಹನು.