Index   ವಚನ - 300    Search  
 
ಮೂಲಮಂತ್ರಾತ್ಮಸ್ವರೂಪದಿಂದ ಸಹಸ್ರಾದಿತ್ಯ ತೇಜೋರೂಪಾಗಿ ಬೆಳಗುತ್ತಿಹ ದೇವರದೇವನಾದ ಮಹಾದೇವನ, ಅನಂತ ಶಕ್ತಿವಂತನ, ವಿಶ್ವಾತ್ಮನಾದ ನಾದಾತ್ಮ ಶಿವನ, ಸದಾ ಸರ್ವಾಂಗವು ಕರ್ಣಂಗಳಾಗಿ ಕೇಳಿ ಕೇಳಿ, ಮನ ಮಚ್ಚಿ ಆ ಪರಮಜ್ಞಾನಾನಂದರೂಪನ ನೆನೆನೆನೆದು, ಮರಳಿ ಮರಳಿ ಸರ್ವಾಂಗದಲ್ಲಿ ಸೋಂಕಿ ಸೋಂಕಿ, ಎನ್ನ ಕರಣೇಂದ್ರಿಯಗಳೆಲ್ಲವು ಲಿಂಗಾಕಾರವಾಗಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೊಳಗಡಗಿದವು.