Index   ವಚನ - 310    Search  
 
ಆಚಾರವೆಂಬ ಭಿತ್ತಿಯ ಮೇಲೆ, ವಿಚಾರವೆಂಬ ಚಿತ್ರವ ಚಿತ್ರಿಸಿ, ಜ್ಞಾನವೆಂಬ ಕಳೆಯ ನೆಲೆಗೊಳಿಸಿ, ಅನುಭಾವವೆಂಬ ಮಂಟಪದಲ್ಲಿ ಶರಣ ಕುಳ್ಳಿರ್ದು, ನೆತ್ತಿಯ ನಯನವ ತೆರೆದು ನೋಡಲು, ಆಚಾರ ವಿಚಾರದೊಳಗಡಗಿತ್ತು. ವಿಚಾರ ಸುವಿಚಾರದೊಳಗಡಗಿತ್ತು. ಸುವಿಚಾರ ಸುಜ್ಞಾನದೊಳಗಡಗಿತ್ತು. ಮಹಾನುಭಾವ ಶರಣನೊಳಗಡಗಿತ್ತು. ಶರಣನಿರ್ದ ತನ್ನ ತಾ ಆಚಾರವನುಂಗಿ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.