Index   ವಚನ - 312    Search  
 
ಲಿಂಗದಲ್ಲಿ ಲೀಯವಾದ ಪರಮಾನಂದ ಸ್ವರೂಪಂಗೆ ಕಾಯವಿಲ್ಲ, ಕಾಯವಿಲ್ಲಾಗಿ ಕರ್ಮವಿಲ್ಲ. ಅದೆಂತೆಂದಡೆ: ಕಾರ್ಯವಿಲ್ಲದ ಕುಲಾಲಚಕ್ರಭ್ರಮಣದಂತೆ, ದೇಹವಿಡಿದು ಚರಿಸಿದನೆಂದಡೆ ದೇಹಿಯೆನಬಹುದೇ ಶರಣನ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲವು ತಾನೆ ಬೇರಿಲ್ಲಾ.