Index   ವಚನ - 314    Search  
 
ಲಿಂಗ ಬೇರೆ, ಶರಣ ಬೇರೆಂದು ಹಂಗಿಸಿ ನುಡಿಯಲಾಗದು. ಲಿಂಗ ಬೇರೆ, ಶರಣ ಬೇರೆಯೆ? ಶಿವಶಿವ ಒಂದೇ ಕಾಣಿರಣ್ಣ. ಸುವರ್ಣ ಆಭರಣವಾಯಿತ್ತೆಂದಡೆ, ಅದು ನಾಮ- ರೂಪಭೇದವಲ್ಲದೆ ವಸ್ತುಭೇದವಲ್ಲ. ಭಕ್ತಿಯ ವೈಭವದಿಂದ ಶರಣ ಸಕಾಯನಾಗಿ ಅವತರಿಸಿದೆನೆಂದಡೆ ಬೇರಾಗಬಲ್ಲನೇ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಲಿಂಗವೆಂದಡೂ ಶರಣನೆಂದಡೂ ಒಂದೇ ಕಾಣಿರಣ್ಣಾ.