Index   ವಚನ - 319    Search  
 
ಸರ್ವ ಕ್ರೀಯ ಲಯಸ್ಥಾನವಾದ ಭಾವಭರಿತ ಲಿಂಗವ ಭಾವ ಭಾವಿಸುತ, ಭಾವ ಲಯವಾಯಿತ್ತು ನೋಡಾ. ಇನ್ನು ಭಾವಿಸಲುಂಟೆ ಹೇಳ ಮಹಾಘನವ? ಭಾವ ನಿರ್ಭಾವದ ನಿಜವು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲವು.