ಹರ ಹರ ಶಿವ ಶಿವ ಪ್ರಸಾದದ ಘನವ,
ಪ್ರಸಾದಿಯ ಘನವನೇನೆಂದುಪಮಿಸುವೆನು?
ಪ್ರಸಾದವಿಲ್ಲದೆ ಪ್ರಸಾದಿಯಿಲ್ಲ. ಪ್ರಸಾದಿಯಿಲ್ಲದೆ ಪ್ರಸಾದವಿಲ್ಲ.
ಶಿವ ಶಿವಾ ಒಂದನೊಂದು ಬಿಡದೆ ಎರಡೊಂದಾಗಿ ಕೂಡಿ
ಬೆಳಗುವ ಪರಿಯ ನೋಡಾ!
ಪ್ರಸಾದವು ಪ್ರಸಾದಿಯ ಗ್ರಹಿಸಿ ಪ್ರಸಾದಿಯಾಯಿತ್ತು.
ಪ್ರಸಾದಿಯೂ ಪ್ರಸಾದವ ಗ್ರಹಿಸಿ ಪ್ರಸಾದವಾದಿರವನೇನೆಂಬೆನು?.
ಇಂತು ಒಂದರೊಳಗೊಂದು ಕೂಡಿ
ಎರಡೊಂದಾದ ಘನವನುಪಮಿಸಬಾರದು.
ವಾಙ್ಮನಕ್ಕತೀತವಾದ ನಿಲವನು
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ತಾನೆ ಬಲ್ಲಾ.
Art
Manuscript
Music
Courtesy:
Transliteration
Hara hara śiva śiva prasādada ghanava,
prasādiya ghanavanēnendupamisuvenu?
Prasādavillade prasādiyilla. Prasādiyillade prasādavilla.
Śiva śivā ondanondu biḍade eraḍondāgi kūḍi
beḷaguva pariya nōḍā!
Prasādavu prasādiya grahisi prasādiyāyittu.
Prasādiyū prasādava grahisi prasādavādiravanēnembenu?.
Intu ondaroḷagondu kūḍi
eraḍondāda ghanavanupamisabāradu.
Vāṅmanakkatītavāda nilavanu
nijaguru svatantrasid'dhaliṅgēśvara tāne ballā.