Index   ವಚನ - 347    Search  
 
ಅಣುವಿಂಗೆ ಅಣುವಾಗಿ, ಮಹತ್ತಿಂಗೆ ಮಹತ್ತಾಗಿ ಪರಿಪೂರ್ಣವಾದ ಪರವೆಂಬ ಪ್ರಸಾದಮೂರ್ತಿಯ ಇರವ ಹೇಳಿಹೆನು ಕೇಳಿರಣ್ಣ. ಮುಂದೆ ತಾರಾ ಬೀಜ, ಹಿಂದೆ ಸುನಾದ ಬೀಜ, ಬಲದಲ್ಲಿ ಆತ್ಮ ಬೀಜ, ಎಡದಲ್ಲಿ ವಿದ್ಯಾ ಬೀಜ, ಎಂಟರಲ್ಲಿ ಅಷ್ಟೈಶ್ವರ್ಯ, ಅಷ್ಟಶಕ್ತಿ ಬೀಜ, ಹದಿನಾರರಲ್ಲಿ ಕಲೆ, ಕಲಾಪತಿಗಳು ಮೂವತ್ತೆರಡರಲ್ಲಿ ವಿಕಲೆ ವಿಃಕಲಾಪತಿಗಳು. ಇಂತೀ ತ್ರಿಮಂಡಲ ಮಧ್ಯದ ಸೂಕ್ಷ್ಮಕರ್ಣಿಕೆಯಲ್ಲಿಯೆ ಶುದ್ಧ ಪ್ರಸಾದವನು ಮಹಾನುಭಾವರ ಸಂಗದಲ್ಲಿದ್ದರಿದೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.