ಜಗಭರಿತ ಶಿವನೆಂದು ನೆಗಳಿ ಹೊಗಳುತಿವೆ ವೇದಂಗಳೆಲ್ಲ.
`ಏಕಮೇವಾದ್ವಿತೀಯ' ಎಂದು ಹೊಗಳುತಿವೆ ವೇದಂಗಳೆಲ್ಲ.
`ವಿಶ್ವತಃ ಪಾದ ಪಾಣಿ, ವಿಶ್ವತೋಮುಖ
ವಿಶ್ವತಃ ಶ್ರೋತ್ರ' ಎಂದು ಹೊಗಳುತಿವೆ ವೇದಂಗಳೆಲ್ಲ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.
ಶರಣಭರಿತ ಲಿಂಗ ಲಿಂಗಭರಿತ ಶರಣನೆಂದು,
ಹೊಗಳಲರಿಯದೆ ನಿಂದುವು ವೇದಂಗಳೆಲ್ಲ.
Art
Manuscript
Music
Courtesy:
Transliteration
Jagabharita śivanendu negaḷi hogaḷutive vēdaṅgaḷella.
`Ēkamēvādvitīya' endu hogaḷutive vēdaṅgaḷella.
`Viśvataḥ pāda pāṇi, viśvatōmukha
viśvataḥ śrōtra' endu hogaḷutive vēdaṅgaḷella.
Nijaguru svatantrasid'dhaliṅgēśvara.
Śaraṇabharita liṅga liṅgabharita śaraṇanendu,
hogaḷalariyade ninduvu vēdaṅgaḷella.