Index   ವಚನ - 359    Search  
 
ಶಿವಪ್ರಸಾದಸಂಪತ್ತು ದೊರಕೊಂಡಾತಂಗೆ ಶಿವಭಾವವಲ್ಲದೆ ಅನ್ಯಭಾವ ಉಂಟೆ ಹೇಳಾ? ವಿಶ್ವನೊಳಡಗಿ ತೋರುವ ವಿಶ್ವ ಜಗಜ್ಜಾಲವು ಒಮ್ಮೆ ತೋರುವದು, ಒಮ್ಮೆ ಅಡಗುವದು. ಅದರಂತೆ ತೋರದೆ ಅಡಗದೆ ಉಳುಮೆಯಾದ ಅಂಥ ಪ್ರಸಾದವನು ಅನುಭವಿಸಿದ ಶಿವಪ್ರಸಾದಿಗೆ ಭೇದದ ಅರಿವು ನಿಃಪತಿಯಾಗಿ ಅಭೇದಜ್ಞಾನ ಸಿದ್ಧವಾಯಿತ್ತು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣಂಗೆ.