Index   ವಚನ - 373    Search  
 
ಎಲ್ಲೆಲ್ಲಿ ನೋಡಿದಡಲ್ಲಲ್ಲಿ ನೀನೆ ದೇವ. ಪಿಂಡಾಂಡಂಗಳೊಳಗೆಲ್ಲ ನೀನೆ ದೇವ. ಮಹದಾಕಾಶರೂಪ ನಿರುಪಾಧಿಕ ಪರಂಜ್ಯೋತಿ ನೀನೆ ದೇವ. ಉಪಮಾತೀತ ವಾಙ್ಮನಕ್ಕಗೋಚರ ನೀನೆ ದೇವ. ಸ್ವಾನುಭೂತಿ ಸ್ವರೂಪ ಶರಣಜನ ಮನೋವಲ್ಲಭ ನೀನೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.