ಶರಣನ ಸುಜ್ಞಾನಾಗ್ನಿಯಿಂದ, ಸಂಸಾರಬೀಜ ರೂಪವಾದ
ಅಹಂಕಾರಾಂಕುರವು ಸುಟ್ಟು, ಮಾಯಾವಾಸನೆಯಳಿದು,
ಮಾನಸೇಂದ್ರಿಯ ಜೀವಶಕ್ತಿಗಳಿಲ್ಲದ ಮೂರ್ತಿಯೇ
ಚಿಲ್ಲಿಂಗಕ್ಕಾಶ್ರಯವಾದುದಾಗಿ,
ಚಿನ್ಮೂರ್ತಿಯಾದ ಶರಣನ ಜ್ಞಾನದಲ್ಲಿ,
ಸಕಲ ಪ್ರಪಂಚುಗಳೆಲ್ಲ ಅಡಗಿದವಾಗಿ,
ಆ ಶರಣನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು
ತಾನೇ ಆಗಿಹನು.
Art
Manuscript
Music
Courtesy:
Transliteration
Śaraṇana sujñānāgniyinda, sansārabīja rūpavāda
ahaṅkārāṅkuravu suṭṭu, māyāvāsaneyaḷidu,
mānasēndriya jīvaśaktigaḷillada mūrtiyē
cilliṅgakkāśrayavādudāgi,
cinmūrtiyāda śaraṇana jñānadalli,
sakala prapan̄cugaḷella aḍagidavāgi,
ā śaraṇanu, nijaguru svatantrasid'dhaliṅgēśvaranu
tānē āgihanu.