ಅಖಂಡ ಗೋಳಾಕಾಕಾರವಾಗಿರ್ದ
ಮಹಾಲಿಂಗವೆ ಅಂಗವಿಡಿದಲ್ಲಿ,
ಪ್ರಾಣಲಿಂಗವೆಂದು, ಇಷ್ಟಲಿಂಗವೆಂದು,
ಇವೆರಡರ ಸಂಘಟ್ಟ ಭಾವಲಿಂಗವೆಂದು
ಅಂಗವ ಕುರಿತು ಮೂರು ತೆರನಾಯಿತ್ತು.
ಆಚಾರಾದಿ ಮಹಾಲಿಂಗವೆಂದು ಇಂದ್ರಿಯವ
ಕುರಿತು ಆರು ತೆರನಾಯಿತ್ತು.
ತತ್ತ್ವವ ಕುರಿತು ಮೂವತ್ತಾರು ತೆರನಾಯಿತ್ತು.
ಸ್ಥಲವ ಕುರಿತು ನೂರೊಂದು ತೆರನಾಯಿತ್ತು.
ಕರಣವ ಕುರಿತು ಇನ್ನೂರ ಹದಿನಾರಾಯಿತ್ತು.
ಇಂತೀ ಪಸರಿಸಿದ ಪರಬ್ರಹ್ಮವೇ ಏಕಮಯವಾಗಿ ನಿಂದುದಕ್ಕೆ ದೃಷ್ಟ:
ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ |
ಲಿಂಗಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್ ||
ಇಂತಪ್ಪ ಲಿಂಗವೆ ನೀನಲಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ,
ಮಾಂ ತ್ರಾಹಿ, ತ್ರಾಹಿ ಕರುಣಾಕರನೆ.
Art
Manuscript
Music
Courtesy:
Transliteration
Akhaṇḍa gōḷākākāravāgirda
mahāliṅgave aṅgaviḍidalli,
prāṇaliṅgavendu, iṣṭaliṅgavendu,
iveraḍara saṅghaṭṭa bhāvaliṅgavendu
aṅgava kuritu mūru teranāyittu.
Ācārādi mahāliṅgavendu indriyava
kuritu āru teranāyittu.
Tattvava kuritu mūvattāru teranāyittu.
Sthalava kuritu nūrondu teranāyittu.
Karaṇava kuritu innūra hadinārāyittu.
Intī pasarisida parabrahmavē ēkamayavāgi nindudakke dr̥ṣṭa:
Liṅgamadhyē jagatsarvaṁ trailōkyaṁ sacarācaraṁ |
liṅgahyāt paraṁ nāsti tasmālliṅgaṁ prapūjayēt ||
intappa liṅgave nīnalā, basavapriya kūḍalacennasaṅgamadēvā,
māṁ trāhi, trāhi karuṇākarane.