ಅಯ್ಯಾ, ಎನ್ನ ಬಾಳುವೆಯಲ್ಲಿ ಹೇಳದೆ ಕೇಳದೆ,
ಒಬ್ಬ ಕಾಳರಕ್ಕಸಿ ನುಂಗಿದಳಯ್ಯ.
ಆ ಬಾಳುವೆಗೋಸುಗ ಕಾಳರಕ್ಕಸಿಯ
ಬಾಯೊಳಗೆ ಸಿಲ್ಕಿದೆನಯ್ಯಾ.
ಆ ಕಾಳರಕ್ಕಸಿ ಆವಾಗ ಅಗಿದಾಳೆಂದರಿಯೆ,
ಆವಾಗ ಉಗಿದಾಳೆಂದರಿಯೆ.
ಆ ಕಾಳರಕ್ಕಸಿಯ ಬಾಯಿಂದವೆ ಹೊರಟು
ಆ ಬಾಳುವೆಯನಲ್ಲಿಯೆ ಬಿಟ್ಟು, ಆ ಕಾಳರಕ್ಕಸಿಯ
ಬಾಯಿಂದಲೆ ಹೊರವಂಟು
ಆ ಮಹಾಜಾಣನಾಳುವ ಪುರವ ಹೊಕ್ಕೆ.
ಆ ಜಾಣನಾಳುವ ಪುರದೊಳಗೆ,
ಕಾಣಬಾರದುದನೆ ಕಂಡೆ, ಕೇಳಬಾರದುದುನೆ ಕೇಳಿದೆ.
ಕದಳಿಯನೆ ದಾಂಟಿದೆ, ಜ್ಞಾನಜ್ಯೋತಿಯ ಕಂಡೆ.
ತಾನು ತಾನಾಗಿಪ್ಪ ಮಹಾಬೆಳಗಿನೊಳು
ನಾನು ಓಲಾಡುತ್ತಿಪ್ಪೆನಯ್ಯ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ,
Art
Manuscript
Music
Courtesy:
Transliteration
Ayyā, enna bāḷuveyalli hēḷade kēḷade,
obba kāḷarakkasi nuṅgidaḷayya.
Ā bāḷuvegōsuga kāḷarakkasiya
bāyoḷage silkidenayyā.
Ā kāḷarakkasi āvāga agidāḷendariye,
āvāga ugidāḷendariye.
Ā kāḷarakkasiya bāyindave horaṭu
ā bāḷuveyanalliye biṭṭu, ā kāḷarakkasiya
bāyindale horavaṇṭu
ā mahājāṇanāḷuva purava hokke.
Ā jāṇanāḷuva puradoḷage,
kāṇabāradudane kaṇḍe, kēḷabāradudune kēḷide.
Kadaḷiyane dāṇṭide, jñānajyōtiya kaṇḍe.
Tānu tānāgippa mahābeḷaginoḷu
nānu ōlāḍuttippenayya,
basavapriya kūḍalacennabasavaṇṇā,