Index   ವಚನ - 34    Search  
 
ಅಯ್ಯಾ, ಶಿವಭಕ್ತರು ನುಡಿವಲ್ಲಿ ಜಾಣತನದಿಂದ ನುಡಿವರು. ನೀಡುವಲ್ಲಿ ಭೇದದಿಂದ ನೀಡುವರು. ಕೊಡುವಲ್ಲಿ ಸತ್ಪಾತ್ರಕ್ಕೆ ಕೊಡುವರು. ಬಿಡುವಲ್ಲಿ ಶರಣಗೋಷ್ಠಿಯ ಬಿಡುವರು. ಪೊಡವಿಯೊಳಿವರ ಭಕ್ತರೆನ್ನಬಹುದೆ? ಅದಂತಿರಲಿ, ಎನ್ನೊಡೆಯ ಬಸವಪ್ರಿಯನಡಿಗಳ ನೆನೆವ ಶರಣ ಲಿಂಗೈಕ್ಯರು ಮೆಡುವ ಪಡುಗ ಪಾದರಕ್ಷೆಯ ಕಾಯಿರಿಸಯ್ಯ, ಚೆನ್ನಬಸವಣ್ಣಾ.