Index   ವಚನ - 62    Search  
 
ಆಸೆ ರೋಷವೆಂಬ ದ್ವೇಷವ ಬಿಟ್ಟು, ದೋಷ ದುರಿತವ ಬಿಟ್ಟು, ಕ್ಲೇಶವ ಹರಿದು, ಸಾಸಿರಮುಖದೊಳು ಸೂಸುವ ಮನವ ನಿಲ್ಲಿಸಿ, ನಿರಾಶಿಕನಾಗಿ ನಿಂದರೆ, ಬಸವಪ್ರಿಯ ಕೂಡಲಚೆನ್ನಬಸವಣ್ಣ.