ಉದಯ, ಮಧ್ಯಾಹ್ನ, ಅಸ್ತಮಯ, ಕತ್ತಲೆ ಬೆಳಗು,
ದಿನ ವಾರ ಲಗ್ನತಿಥಿ ಮಾಸ ಸಂವತ್ಸರ ಹೋಗುತ್ತ ಬರುತ್ತಲಿವೆ.
ಇವ ನೋಡಿದವರೆಲ್ಲ ಇದರೊಳಗೆ ಹೋಗುತ್ತ ಬರುತ್ತ ಇದ್ದಾರೆ.
ಜಗಕ್ಕೆ ಇವೀಗ ಇಷ್ಟವಾಗಿಪ್ಪವು. ಎನ್ನ ದೇವಂಗೆ ಇವೊಂದೂ ಅಲ್ಲ.
ದಿನಕಾಲ ಯುಗಜುಗ ಪ್ರಳಯಕ್ಕೆ ಹೊರಗಾದ ಆ ದೇವನ,
ಅಂಗವಿಸಿ ಮುಟ್ಟಿ ಹಿಡಿದ ಕಾರಣ,
ಎಮ್ಮ ಶರಣರು ಪ್ರಳಯಕ್ಕೆ ಹೊರಗಾದರು.
ಇದನರಿದು, ಅಂತಪ್ಪ ಶರಣರ ಪಾದವ ನಂಬಿ,
ಕೆಟ್ಟು ಬಟ್ಟಬಯಲಾದೆನಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣ.
Art
Manuscript
Music
Courtesy:
Transliteration
Udaya, madhyāhna, astamaya, kattale beḷagu,
dina vāra lagnatithi māsa sanvatsara hōgutta baruttalive.
Iva nōḍidavarella idaroḷage hōgutta barutta iddāre.
Jagakke ivīga iṣṭavāgippavu. Enna dēvaṅge ivondū alla.
Dinakāla yugajuga praḷayakke horagāda ā dēvana,
aṅgavisi muṭṭi hiḍida kāraṇa,
em'ma śaraṇaru praḷayakke horagādaru.
Idanaridu, antappa śaraṇara pādava nambi,
keṭṭu baṭṭabayalādenayyā,