Index   ವಚನ - 87    Search  
 
ಓದಿದರೇನಯ್ಯಾ? ಗಾದೆಯ ಮಾತಾಯಿತ್ತು. ಹಾಡಿದರೇನಯ್ಯಾ? ಹರಟೆಯ ಕಥೆಯಾಯಿತ್ತು. ನೋಡಿದರೇನಯ್ಯಾ? ಭೂತದಂತಾಯಿತ್ತು. ಇದರ ಭೇದಾದಿ ಭೇದವನರಿದು, ಲಿಂಗದಲ್ಲಿ ಸಾಧನೆಯ ಮಾಡುವ ಶರಣರ ಪಾದಕ್ಕೆರಗಿ ನಾನು ಬದುಕಿದೆನು ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.