Index   ವಚನ - 86    Search  
 
ಓದಲೇತಕ್ಕೆ ಪ್ರಾಣಲಿಂಗಿಗೆ? ಹಾಡಲೇತಕ್ಕೆ ಶರಣಂಗೆ? ನೋಡಿ ಕೂಡಲೇತಕ್ಕೆ ಐಕ್ಯಂಗೆ? ಆರೂಢಿಯ ಕೂಟ ಅಜಡತ್ವಂಗೆ ಬಾಹ್ಯಾಂತರಂಗೆ. ಆಹ್ವಾನ ವಿಸರ್ಜನವೆಂದು ಭೇದಿಸದವನೆ ಪ್ರಾಣಲಿಂಗಿ, ಪ್ರಣವ ಸ್ವರೂಪಿ, ಪರಂಜ್ಯೋತಿ, ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ.