ಕೇಳು ಕೇಳಾ, ಭಕ್ತ, ಮಹೇಶ, ಪ್ರಸಾದಿ,
ಪ್ರಾಣಲಿಂಗಿ, ಶರಣ, ಐಕ್ಯರೆಂದು ನುಡಿದಾಡುತಿಪ್ಪಿರಿ,
ಇಂತೀ ಷಟ್ಸ್ಥಲ ಸಂಪನ್ನತೆ
ಎಲ್ಲರಿಗೆ ಎಂತಾಯಿತ್ತಯ್ಯ ಹೇಳಿರಣ್ಣಾ!
ಭಾಗ್ಯವುಳ್ಳಾತಂಗೆ ಭಕ್ತಿಸ್ಥಲವಾಗದು.
ಮಕ್ಕಳುಳ್ಳಾತಂಗೆ ಮಹೇಶ್ವರಸ್ಥಲವಾಗದು.
ಪರಧನ ಚೋರಂಗೆ ಪ್ರಸಾದಿಸ್ಥಲವಾಗದು.
ಇಹಪರವೆಂದು ಕಾಮಿಸುವಾತಂಗೆ ಪ್ರಾಣಲಿಂಗಿಸ್ಥಲವಾಗದು.
ಪರದಲ್ಲಿ ಪರಿಣಾಮವನರಿಯದಾತಂಗೆ [ಶರಣ]ಸ್ಥಲವಾಗದು.
ಹರುಷವೇ ಹರನಲ್ಲಿ ಲೀಯವಾದಾತಂಗೆ ಐಕ್ಯಸ್ಥಲವಾಗದು.
ನೆರೆದ ದೇಹವು ಕರ್ಪುರ ಉರಿಗೊಂಡಂತೆ
ಅಲ್ಲದೆ ನಿರವಯಸ್ಥಲವಾಗದು.
ಇದು ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Kēḷu kēḷā, bhakta, mahēśa, prasādi,
prāṇaliṅgi, śaraṇa, aikyarendu nuḍidāḍutippiri,
intī ṣaṭsthala sampannate
ellarige entāyittayya hēḷiraṇṇā!
Bhāgyavuḷḷātaṅge bhaktisthalavāgadu.
Makkaḷuḷḷātaṅge mahēśvarasthalavāgadu.
Paradhana cōraṅge prasādisthalavāgadu.
Ihaparavendu kāmisuvātaṅge prāṇaliṅgisthalavāgadu.
Paradalli pariṇāmavanariyadātaṅge [śaraṇa]sthalavāgadu.
Haruṣavē haranalli līyavādātaṅge aikyasthalavāgadu.
Nereda dēhavu karpura urigoṇḍante
allade niravayasthalavāgadu.
Idu nam'ma basavapriya kūḍalacennabasavaṇṇā.