Index   ವಚನ - 104    Search  
 
ಗುರು ಗುರು ಎಂದು ನುಡಿದಾಡುತಿಪ್ಪರು, ಆ ಗುರು ನೆಲೆ ಎಂತಿಪ್ಪುದೆಂದರಿಯರು. ಆ ಗುರು ನೆಲೆ ಎಂತೆಂದರೆ, ಪರಮಸುಖಪರಿಣಾಮ ತಲೆಗೇರಿ ನೆಲೆಗೊಂಬುದೆ ಗುರುನೆಲೆ. ವರ ಸಮಾಧಿಯೊಳಗೆ ಚರಿಸುವ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವನರಿದಿಪ್ಪುದೆ ಗುರು ನೆಲೆ. ಇದನರಿಯದೆ ಮನಕೆ ಬಂದಂತೆ ಕಾಯವೆ ಗುರು, ಪ್ರಾಣವೆ ಲಿಂಗ, ಭಾವವೆ ಜಂಗಮವೆಂದು ನುಡಿದಾಡುವ ಗಾವಿಲರ ಮಾತ ಕೇಳಲಾಗದು ಎಂದಾತ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.