ಚೌದಳ ಷಡುದಳ ದಶದಳ
ದ್ವಾದಶದಳ ಷೋಡಶದಳ ದ್ವಿದಳ,
ಒಳಹೊರಗಣ ಸ್ಥಳಕುಳವನರಿದು,
ಬೆಳಗುವ ಬೆಳಗ, ಹೊಳೆವ
ಪ್ರಭೆ ಪ್ರಜ್ವಲಿಸಿ ಕಳವಳವಳಿದು,
ಕಾಯದ ಕದಳಿಯ ಗೆಲಿದು,
ಕರಗಿ ಒಂದಾದ ಶರಣನೆ ಹರನು,
ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ.
Art
Manuscript
Music
Courtesy:
Transliteration
Caudaḷa ṣaḍudaḷa daśadaḷa
dvādaśadaḷa ṣōḍaśadaḷa dvidaḷa,
oḷahoragaṇa sthaḷakuḷavanaridu,
beḷaguva beḷaga, hoḷeva
prabhe prajvalisi kaḷavaḷavaḷidu,
kāyada kadaḷiya gelidu,
karagi ondāda śaraṇane haranu,
basavapriya kūḍalasaṅgamadēva prabhuve.