ಘನವೆಂದರೆ ತನುವಿನೊಳಗಾಯಿತ್ತು,
ತನುವೆಂದರೆ ಮನದೊಳಗಾಯಿತ್ತು.
ಮನವೆಂದರೆ ಮಾಯೆಯೊಳಗಾಯಿತ್ತು.
ಮಾಯೆಯೆಂದರೆ ಭಾವದೊಳಗಾಯಿತ್ತು.
ಭಾವವೆಂದಡೆ ನಿರ್ಭಾವವಾಯಿತ್ತು,
ನಿರ್ಭಾವವೆಂದರೆ ಭಕ್ತನಾಯಿತ್ತು.
ಭಕ್ತನೆಂದರೆ ವಿರಕ್ತನಾದ, ವಿರಕ್ತನೆಂದರೆ ಭಕ್ತನಾದ.
ಗುರುವೆಂದರೆ ಶಿಷ್ಯನಾದ, ಶಿಷ್ಯನೆಂದರೆ ಗುರುವಾದ.
ಇಂತಿದೀಗ ಐಕ್ಯಸ್ಥಲವು.
ಇದನರಿಯದೆ ತಮ್ಮ ಪುದಿದ ಸಂಸಾರಕ್ಕೊಳಗಾಗಿ,
ತುದಿ ಮೊದಲು ಕಾಣದೆ,
ಸದಮದವಹ ಸಂಸಾರವಿಷಯದೊಳಗೆ
ಮುಳುಗಿದವರೆತ್ತ ಬಲ್ಲರೊ,
ನಿಮ್ಮ ಶರಣರ ಸುದ್ದಿಯ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ?
Art
Manuscript
Music
Courtesy:
Transliteration
Ghanavendare tanuvinoḷagāyittu,
tanuvendare manadoḷagāyittu.
Manavendare māyeyoḷagāyittu.
Māyeyendare bhāvadoḷagāyittu.