Index   ವಚನ - 135    Search  
 
ಧರೆಯ ಹೊತ್ತಿರ್ಪ ಸರ್ಪ ಹೆರಿಯಿತ್ತಾಕಾಶಕ್ಕೆ. ನೆರೆದ ಜನವೆಲ್ಲಾ ಹೆದರಿ ನೆರೆಯಿತ್ತು ನೀರಲ್ಲಿ. ಧರೆ ಜಲ ಅಗ್ನಿಯೊಳು ಬೆರೆದು ಬೆಂದು ಉರಿದವು. ಹರನ ಮಂಥಣಿಯ ಶೂಲವನೇರಿ, ಸರ್ಪನನಡಗಿಸಿ, ಉರಿಯ ಉಗುಳಿದರೆ, ಧರೆಯನುಗುಳಿಸಿತ್ತು, ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ.