ಪ್ರಣಮವೆ ಪ್ರಾಯ, ಪ್ರಾಣವೆ ಲಿಂಗ.
ಲಿಂಗವೆ ಅಂಗ, ಆ ಅಂಗವೆ ಆಗಮ್ಯ ಅಗೋಚರ ಅಪ್ರಮಾಣ.
ಲಿಂಗಸಂಗವೆ ಜಂಗಮಲಿಂಗ.
ಜಂಗಮ ಒಂದೆರಡೆಂದು ಸಂದು ಮಾಡಲಂಜಿ ಬೆರಗಾಗಿರಲು,
ಬೇಗಯೆದ್ದು ಬೆಳಗಾಯಿತ್ತ ಕಂಡು,
ಕಣ್ಣು ಮುಚ್ಚಿ ಕರಗಿ ಪ್ರಾಣಲಿಂಗ ಲೀಯವಾದ,
ಬಸವಪ್ರಿಯ ಕೂಡಸಂಗಮದೇವ ಪ್ರಭುವೆ.
Art
Manuscript
Music
Courtesy:
Transliteration
Praṇamave prāya, prāṇave liṅga.
Liṅgave aṅga, ā aṅgave āgamya agōcara apramāṇa.
Liṅgasaṅgave jaṅgamaliṅga.