Index   ವಚನ - 156    Search  
 
ಪ್ರಸಾದವೆಂದು, ಅರ್ಪಿತಪ್ರಸಾದವೆಂದು, ಅವಧಾನಪ್ರಸಾದವೆಂದು, ಪರಿಣಾಮಪ್ರಸಾದವೆಂದು, ಸಮಯಪ್ರಸಾದವೆ,ಧು, ಸರ್ವಾಂಗಪ್ರಸಾದವೆಂದು, ಶುದ್ಧಪ್ರಸಾದವೆಂದು, ಸಿದ್ಧಪ್ರಸಾದವೆಂದು, ಪ್ರಸಿದ್ಧಪ್ರಸಾದವೆಂದು, ಪರಿಪೂರ್ಣಪ್ರಸಾದವೆಂದು, ದಿವ್ಯಪ್ರಸಾದವೆಂದು, ಆದಿಪ್ರಸಾದವ ಅಂಗಪ್ರಾಣ ಭಾವ. ಅದಕ್ಕೆ ದೃಷ್ಟ : ಪ್ರಕಾರೋಯಂ ಪ್ರಸಾದಸ್ಸ್ಯಾತ್ ಸಾಕಾರಂ ಭಕ್ತಿರುಚ್ಯತೇ | ಪ್ರಸಾದ ಪೂರ್ವಿಕಾ ಭಕ್ತಿರ್ಮುಕ್ತಿರೇತಿ ದಕಾರಕಂ || ಎಂದುದಾಗಿ, ಇಂತೀ ಪ್ರಸಾದಿ ನೀನೆಯಲಾ, ಬಸವಪ್ರಿಯ ಕೂಡಲಸಂಗಮದೇವಾ, ಮಾಂ ತ್ರಾಹಿ, ತ್ರಾಹಿ ಕರುಣಾಕರನೆ.