Index   ವಚನ - 168    Search  
 
ಭಕ್ತನಾದರೆ ಪೃಥ್ವಿಸಾರದಲಾದ ಪದಾರ್ಥವ ಲಿಂಗಕ್ಕೆ ಕೊಡದ ಭಾಷೆ. ಮಹೇಶ್ವರನಾದರೆ ಅಪ್ಪುವಿನ ಸಾರದಿಂದ ಉದಕವ ಲಿಂಗಕ್ಕೆ ಮಜ್ಜನಕ್ಕೆರೆಯದ ಭಾಷೆ. ಪ್ರಸಾದಿಯಾದರೆ ಅಗ್ನಿಯಿಂದಾದ ಕಳೆಯ ಲಿಂಗಕ್ಕೆ ವೇದಿಸದ ಭಾಷೆ. ಪ್ರಾಣಲಿಂಗಿಯಾದರೆ ವಾಯುವಿನಿಂದಾದ ಧ್ಯಾನವ ಲಿಂಗದಲ್ಲಿ ನೋಡದ ಭಾಷೆ. ಶರಣನಾದರೆ ಆಕಾಶದಿಂದಾದ ಶರಣಸತಿ ಲಿಂಗಪತಿಯಾಗಿರಬೇಕು ಐಕ್ಯನಾದರೆ ಆತ್ಮದಿಂದಾದ ಅಹಂ ಮಮತೆಯಲಿ ಲಿಂಗವ ಭಾವಿಸದ ಭಾಷೆ. ಇಂತೀ ಆರರಿಂದ ಮೀರಿ ತೋರುವ ಘನವು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.