ಭಕ್ತನಾದರೆ ಎಂತಿರಬೇಕೆಂದರೆ,
ಉಲುಹಡಗಿದ ವೃಕ್ಷದಂತಿರಬೇಕು.
ಶಿಶು ಕಂಡ ಕನಸಿನಂತಿರಬೇಕು,
ಗಲಭೆಗೆ ನಿಲ್ಲದ ಮೃಗದಂತಿರಬೇಕು.
ತಾಯ ಹೊಲಬುದಪ್ಪಿದ ಎಳೆಗರುವಿನಂತೆ,
ತ್ರಿಕಾಲದಲ್ಲಿಯು ಲಿಂಗವನೆ ನೆನೆವ
ಶರಣರ ಎನಗೊಮ್ಮೆ ತೋರಯ್ಯಾ ಶಿವನೆ,
ಬಸವಪ್ರಿಯ ಕೂಡಲಚೆನ್ನಸಂಗನಬಸವಣ್ಣಾ.
Art
Manuscript
Music
Courtesy:
Transliteration
Bhaktanādare entirabēkendare,
uluhaḍagida vr̥kṣadantirabēku.
Śiśu kaṇḍa kanasinantirabēku,
galabhege nillada mr̥gadantirabēku.
Tāya holabudappida eḷegaruvinante,
trikāladalliyu liṅgavane neneva
śaraṇara enagom'me tōrayyā śivane,
basavapriya kūḍalacennasaṅganabasavaṇṇā.