Index   ವಚನ - 169    Search  
 
ಭಕ್ತನಾದರೆ ಮುಕ್ತಿಪಥಗತಿಗೆ ನಿಲುಕದಂತಿರಬೇಕು. ಮಹೇಶ್ವರನಾದರೆ ಮನದಲ್ಲಿ ಮನ್ಮಥ ಹೊಗದಂತಿರಬೇಕು. ಪ್ರಸಾದಿಯಾದರೆ ತನ್ನ ಪ್ರಾಣವೇ ಅಗ್ನಿಸ್ವರೂಪವೆಯಾಗಿರಬೇಕು. ಪ್ರಾಣಲಿಂಗಿಯಾದರೆ ಪ್ರಾಣವ ನಿಲ್ಲಿಸಿ ಲಿಂಗಪ್ರಾಣಿಯಾಗಿರಬೇಕು. ಶರಣನಾದರೆ ತನ್ನ ಮರಣಬಾಧೆಯ ಗೆಲಿದಿರಬೇಕು. ಐಕ್ಯನಾದರೆ ಅನ್ನ ಪಾನಾದಿಗೆ ಇಚ್ಛೆ ಇಲ್ಲದಿರಬೇಕು. ನಿರ್ವಯಲಾದರೆ ಸರ್ವರ ಕಣ್ಣಿಗೆ ಬಯಲು ಬಯಲಾಗಿರಬೇಕು. ಈ ಷಟ್‍ಸ್ಥಲ ಸಂಪನ್ನತೆಯಲ್ಲಿ ಇರಬಲ್ಲಡೆ, ಎಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.