Index   ವಚನ - 192    Search  
 
ಲಿಂಗಪೂಜೆಯ ಮಾಡುತ್ತ ತಮ್ಮಂಗ ಸುಖದ ಸಲುವಾಗಿ ಹಂಪೆಯ ಕಂಗಳರ ಹಾಗೆ ಕೂಗುತ್ತ, ಅರಚುತ್ತ, ಸತಿಸುತರೊಳಗೆ ಹೊಡೆದಾಡುತಿಪ್ಪರಲ್ಲದೆ, ಆ ಲಿಂಗಕ್ಕೆ ತನಗೆ ಒಡೆಯರಾಗಿದ್ದ ಜಂಗಮ ಬಂದರೆ, ಎತ್ತಲೆಂದರಿಯರು. ಇಂತಪ್ಪ ಕತ್ತಲೆಮನುಜರು, ಲಿಂಗವ ಕಟ್ಟಿದರೇನು ? ಜಂಗಮಕಿಕ್ಕಿದರೇನು ? ಗುರುವಿಂಗೆ ಶರಣೆಂದರೇನು ? ತಮ್ಮ ಮರಣಬಾಧೆಯ ಗೆಲುವನಕ ಹುರುಳಿಲ್ಲ ಹುರುಳಿಲ್ಲ . ಮಾಡಿದ ಭಕ್ತಿ , ಅತ್ತಿಯ ಹಣ್ಣ ಬಿಚ್ಚಿದಂತೆ. ಅವರು ಹೊತ್ತಿಪ್ಪ ವೇಷ ದೊಡ್ಡದು. ಎಮ್ಮ ಸಮಯ ನಾನದನರಿದು, ನಿಮ್ಮಲ್ಲಿ ನಿರ್ಮುಕ್ತನಾದ ಬಳಿಕ, ಈ ಜಗವೇನಾದರೇನಯ್ಯ ಬಸವಪ್ರಿಯ ಕೂಡಲಚೆನ್ನಬಸವಣ್ಣಾ .