ಲಿಂಗಪ್ರಸಾದವ ಜಂಗಮಕ್ಕೆ
ಕೊಡುವ ಕರ್ಮಿಗಳು ನೀವು ಕೇಳಿರೆ.
ಜಂಗಮಪ್ರಸಾದವ ಲಿಂಗಕ್ಕೆ
ಕೊಡುವ ಧರ್ಮಿಗಳು ನೀವು ಕೇಳಿರೆ.
ಲಿಂಗಪ್ರಸಾದವ ಜಂಗಮಕ್ಕೆ
ಕೊಡುವುದು ಅನಾಚಾರ.
ಜಂಗಮಪ್ರಸಾದವ ಲಿಂಗಕ್ಕೆ
ಕೊಡುವುದು ಸದಾಚಾರ.
ಅದೆಂತೆದಡೆ- ಶಿವಧರ್ಮ ಪುರಾಣದಲ್ಲಿ:
ಲಿಂಗಾರ್ಪಿತ ಪ್ರಸಾದಂ ಚ ನದದ್ಯಾಜ್ಜಂಗಮಾರ್ಪಿತಂ|
ಜಂಗಮಾರ್ಪಿತ ಪ್ರಸಾದಂ ತದದ್ಯಾಲಿಂಗಮೂರ್ತಿಷು||
ಎಂದುದಾಗಿ, ಇದು ಕಾರಣ,
ಜಂಗಮಪ್ರಸಾದವ ಲಿಂಗಕ್ಕೆ ಕೊಟ್ಟು ಕೊಂಬೆನಾಗಿ,
ಎನ್ನ ಭವಂ ನಾಸ್ತಿಯಾಯಿತ್ತಯ್ಯಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Liṅgaprasādava jaṅgamakke
koḍuva karmigaḷu nīvu kēḷire.
Jaṅgamaprasādava liṅgakke
koḍuva dharmigaḷu nīvu kēḷire.
Liṅgaprasādava jaṅgamakke
koḍuvudu anācāra.
Jaṅgamaprasādava liṅgakke
koḍuvudu sadācāra.
Adentedaḍe- śivadharma purāṇadalli:
Liṅgārpita prasādaṁ ca nadadyājjaṅgamārpitaṁ|
jaṅgamārpita prasādaṁ tadadyāliṅgamūrtiṣu||
endudāgi, idu kāraṇa,
jaṅgamaprasādava liṅgakke koṭṭu kombenāgi,
enna bhavaṁ nāstiyāyittayyā,
basavapriya kūḍalacennabasavaṇṇā.