ವೇದಪುರಾಣಾಗಮಶಾಸ್ತ್ರ ನಾದದ ಸೊಮ್ಮೆಂಬಿರಿ.
ಆ ನಾದದಿಂದ ಆಕಾಶ ಪುಟ್ಟಿತ್ತು .
ಆಕಾಶದಿಂದ ವಾಯು ಪುಟ್ಟಿತ್ತು ,
ವಾಯುವಿನಿಂದ ಅಗ್ನಿ ಪುಟ್ಟಿತ್ತು .
ಅಗ್ನಿಯಿಂದ ಅಪ್ಪು ಪುಟ್ಟಿತ್ತು ,
ಅಪ್ಪುವಿನಿಂದ ಪೃಥ್ವಿ ಪುಟ್ಟಿತ್ತು.
ಪೃಥ್ವಿಯಿಂದ ಇರುವೆ ಕಡೆಯಾಗಿ
ಎಂಬತ್ತುನಾಲ್ಕುಲಕ್ಷ ಜೀವಂಗಳು ಪುಟ್ಟಿದವು.
ಅದೇನು ಕಾರಣವೆಂದಡೆ, ರಸಗಂಧದಿಂದ ರೂಪಾದವು,
ಅಗ್ನಿಕಳೆಯಾಯಿತ್ತು .
ವಾಯು ಚೈತನ್ಯವಾಯಿತ್ತು.
ಆಕಾಶ ನಾದವಾಯಿತ್ತು.
ಇಂತಿದರೊಳಗೆ ನಮ್ಮ ದೇವ
ಇವರೊಂದರಂತೆಯೂ ಅಲ್ಲ .
ಪಂಚತತ್ವವನಿಳುಹಿ, ಆತ್ಮತತ್ವ ಅನಾತ್ಮನೊಳು ಕೂಡಿ,
ಅನಾಮಯಲಿಂಗ ಕಾಣಬಹುದು.
ಅನಾಮಯಲಿಂಗವ ಕಂಡ ಬಳಿಕ, ಅದೇ ಲಿಂಗೈಕ್ಯವು.
ಇದು ತಪ್ಪದು, ಬಸವಪ್ರಿಯ
ಕೂಡಲಚೆನ್ನಬಸವಣ್ಣಾ .
Art
Manuscript
Music
Courtesy:
Transliteration
Vēdapurāṇāgamaśāstra nādada som'membiri.
Ā nādadinda ākāśa puṭṭittu.
Ākāśadinda vāyu puṭṭittu,
vāyuvininda agni puṭṭittu.
Agniyinda appu puṭṭittu,
appuvininda pr̥thvi puṭṭittu.
Pr̥thviyinda iruve kaḍeyāgi
embattunālkulakṣa jīvaṅgaḷu puṭṭidavu.
Adēnu kāraṇavendaḍe, rasagandhadinda rūpādavu,
agnikaḷeyāyittu.Vāyu caitan'yavāyittu.
Ākāśa nādavāyittu.
Intidaroḷage nam'ma dēva
ivarondaranteyū alla.
Pan̄catatvavaniḷuhi, ātmatatva anātmanoḷu kūḍi,
anāmayaliṅga kāṇabahudu.
Anāmayaliṅgava kaṇḍa baḷika, adē liṅgaikyavu.
Idu tappadu, basavapriya
kūḍalacennabasavaṇṇā.