ಶರಣರಿಗೆ ಭವವುಂಟೆಂದು ಮರ್ತ್ಯದಲ್ಲಿ ಹುಟ್ಟಿದ
ಭವಭಾರಿಗಳು ನುಡಿದಾಡುವರು.
ತಮ್ಮ ಹುಟ್ಟ ತಾವರಿಯರು,
ತಾವು ಮುಂದೆ ಹೊಂದುವದನರಿಯರು.
ಇವರು ಬಂದ ಬಂದ ಭವಕ್ಕೆ ಕಡೆಮೊದಲಿಲ್ಲ .
ಇಂತಪ್ಪ ಸಂದೇಹಿಗಳು
ನಮ್ಮ ಶರಣರ ಹುಟ್ಟ ಬಲ್ಲೆನೆನಬಹುದೆ ?
ತನ್ನ ನರಿದವನಲ್ಲದೆ ಇದಿರನರಿಯರು.
ಈ ಉದರಪೋಷಕರೆಲ್ಲರೂ
ಇದ ಬಲ್ಲೆನೆಂಬುದು ಹುಸಿ.
ಇದ ಬಲ್ಲವರು ಬಲ್ಲರಲ್ಲದೆ,
ಸೊಲ್ಲಿಗಭೇದ್ಯನ ನಾನೆತ್ತ ಬಲ್ಲೆ ?
ಎನ್ನ ಗುರು ಚೆನ್ನಮಲ್ಲೇಶ್ವರನೇ ಬಲ್ಲ .
ಇನ್ನು ನಮ್ಮ ಬಸವಪ್ರಿಯ
ಕೂಡಲಚೆನ್ನಬಸವಣ್ಣನೆ ಬಲ್ಲ .
Art
Manuscript
Music Courtesy:
Video
TransliterationŚaraṇarige bhavavuṇṭendu martyadalli huṭṭida
bhavabhārigaḷu nuḍidāḍuvaru.
Tam'ma huṭṭa tāvariyaru,
tāvu munde honduvadanariyaru.
Ivaru banda banda bhavakke kaḍemodalilla.
Intappa sandēhigaḷu
nam'ma śaraṇara huṭṭa ballenenabahude?
Tanna naridavanallade idiranariyaru.
Ī udarapōṣakarellarū
ida ballenembudu husi.
Ida ballavaru ballarallade,
solligabhēdyana nānetta balle?
Enna guru cennamallēśvaranē balla.
Innu nam'ma basavapriya
kūḍalacennabasavaṇṇane balla.