ಶೀಲವಂತರು, ಶೀಲವಂತರು ಎಂಬರು
ಶೀಲವಂತಿಕೆಯನಾರು ಬಲ್ಲರು ಹೇಳಾ ?
ನೆಲಕೆ ಶೀಲ ಶೀಲವೆಂಬೆನೆ ?
ಹೊಲೆ ಹದಿನೆಂಟು ಜಾತಿ ನಡೆ
ನುಡಿವುದಕ್ಕೆ ಒಂದೆಯಾಯಿತ್ತು.
ಜಲಕೆ ಶೀಲವೆಂಬೆನೆ?
ಮೀನು ಮೊಸಳೆಗಳು
ಖಗಮೃಗಂಗಳು ನಿಂದೆಂಜಲು.
ಬೆಳೆಗೆ ಶೀಲವೆಂಬೆನೆ?
ಎತ್ತು ಕತ್ತೆ ತಿಂದು ಮಿಕ್ಕ ಎಂಜಲು.
ಹೊನ್ನಿಗೆ ಶೀಲವೆಂಬೆನೆ?
ಉರ ಹೊರೆಯಾಗಿಪ್ಪುದು.
ಹೆಣ್ಣಿಗೆ ಶೀಲವೆಂಬೆನೆ?
ಕಣ್ಣುಗೆಡಿಸಿ ಕಾಡುತಿಪ್ಪುದು.
ಇನ್ನಾವುದು ಶೀಲ ಹೇಳಿರಣ್ಣಾ?
ಇದಕ್ಕೆ ಒಳಗಾದವರೆಲ್ಲ ದುಃಶೀಲರು.
ಇದ ಹಿಡಿದು ಹಿಡಿಯದೆ, ಬಿಟ್ಟು ಬಿಡದೆ.
ತನ್ನ ಮನಕ್ಕೆ ಶೀಲವಾಗಿಪ್ಪುದೆ ಅಚ್ಚಶೀಲ ಕಾಣಾ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
Art
Manuscript
Music
Courtesy:
Transliteration
Śīlavantaru, śīlavantaru embaru
śīlavantikeyanāru ballaru hēḷā?
Nelake śīla śīlavembene?
Hole hadineṇṭu jāti naḍe
nuḍivudakke ondeyāyittu.
Jalake śīlavembene?
Mīnu mosaḷegaḷu
khagamr̥gaṅgaḷu ninden̄jalu.
Beḷege śīlavembene?
Ettu katte tindu mikka en̄jalu.
Honnige śīlavembene?
Ura horeyāgippudu.
Heṇṇige śīlavembene?
Kaṇṇugeḍisi kāḍutippudu.
Innāvudu śīla hēḷiraṇṇā?
Idakke oḷagādavarella duḥśīlaru.
Ida hiḍidu hiḍiyade, biṭṭu biḍade.
Tanna manakke śīlavāgippude accaśīla kāṇā,
basavapriya kūḍalacennabasavaṇṇā.