ಸಾವಾಗ ದೇವನೆಂದರೆ, ಸಾವು ಬಿಡುವುದೇ?
ಇದಾವ ಮಾತೆಂದು ನುಡಿವಿರಿ.
ಎಲೆಯಣ್ಣಗಳಿರಾ, ಬಾಳುವಲ್ಲಿ, ಬದುಕುವಲ್ಲಿ,
ಗುರು ಲಿಂಗ ಜಂಗಮವನರಿಯದೆ,
ಹಾಳುಹರಿಯ ತಿಂದ ಶುನಕನಂತೆ
ಕಾಲ್ಗೆಡೆದು ಓಡಾಡಿ ಏಳಲಾರದೆ ಬಿದ್ದಾಗ,
ಶಿವ ಶಿವ ಎಂದರೆ, ಅಲ್ಲಿ ದೇವನಿಪ್ಪನೆಂದು
ಇದ ನೋಡಿ ನಾಚಿ ನಗುರ್ತಿರ್ದೆ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.