Index   ವಚನ - 216    Search  
 
ಸೀಮೆಭೂಮಿಯೆಂದೇನೋ, ಹೇಮವನುರುಹಿದಂಗೆ. ಕಾಮದ ಕತ್ತಲೆಯೆಂದೇನೋ, ಕಾಲನ ಗೆಲಿದಂಗೆ. ನೇಮನಿತ್ಯವೆಂದೇನೋ, ತಾನು ತಾನಾದವಂಗೆ. ಸಾಲ ಶೀಲವೆಂದೇನೋ, ನಿಶ್ಶೂನ್ಯವಾದ ಮಹಾಮಹಿಮ ಶರಣಂಗೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.