Index   ವಚನ - 221    Search  
 
ಸ್ಥಲವೆಂದರೆ ಒಂದು, ನೆಲೆಯೆಂದರೆ ಎರಡು, ಕಲೆಯೆಂದರೆ ಮೂರು, ಕರಣವೆಂದರೆ ನಾಲ್ಕು, ಕಾಯವೆಂದರೆ ಐದು, ಕಾಮವೆಂದರೆ ಆರು, ಸೀಮೆಯೆಂದರೆ ಏಳು, ನೇಮವೆಂದರೆ ಎಂಟು, ತಾಮಸವೆಂದರೆ ಒಂಬತ್ತು, ಹರಿಯೆಂದರೆ ಹತ್ತು, ಹರನೆಂದರೆ ಇನ್ನೊಂದು. ಇದೇ ದಶವಿಧ ಪಾದೋದಕ, ಇದೇ ಏಕಾದಶ ಪ್ರಸಾದ. ಇದೇ ಅರ್ಪಿತ, ಇದೇ ಅವಧಾನ, ಇದೇ ಸುಯಿದಾನ. ಇದೇ ಶುದ್ಧಸಿದ್ಧಪ್ರಸಿದ್ಧ ಪ್ರಸಾದ.ಇದೇ ನಮ್ಮ ಬಸವಪ್ರಿಯಕೂಡಲಚೆನ್ನಬಸವಣ್ಣ ಆಡುವ ಹೊಲಸ್ಥಲದ ನೆಲೆ.