ಹಗಲು ಗೂಗೆಗೆ ಇರುಳಾಗಿಪ್ಪುದು,
ಇರುಳು ಕಪಟಗೆ ಹಗಲಾಗಿಪ್ಪುದು.
ಇದು ಜಗದಾಟ.
ಈ ಹಗಲು ಇರುಳೆಂಬ ಉಭಯವಳಿದು,
ನಿಗಮಂಗಳಿಗೆ ನಿಲುಕದ,
ಸಗುಣ ನಿರ್ಗುಣ ಅಗಮ್ಯ ಅಗೋಚರವಪ್ಪ
ಮಹಾಘನ ಗುರುವಿನ ನೆಲೆಯ,
ನಿಮ್ಮ ಶರಣರು ಬಲ್ಲರಲ್ಲದೆ
ಮತ್ರ್ಯದ ಮರಣಬಾಧೆಗೊಳಗಾಗುವ
ಮನುಜರೆತ್ತ ಬಲ್ಲರೊ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ!
Art
Manuscript
Music
Courtesy:
Transliteration
Hagalu gūgege iruḷāgippudu,
iruḷu kapaṭage hagalāgippudu.
Idu jagadāṭa.
Ī hagalu iruḷemba ubhayavaḷidu,
nigamaṅgaḷige nilukada,
saguṇa nirguṇa agamya agōcaravappa
mahāghana guruvina neleya,
nim'ma śaraṇaru ballarallade
matryada maraṇabādhegoḷagāguva
manujaretta ballaro,
basavapriya kūḍalacennabasavaṇṇā!