ಹುಡಿಯ ಹಾರಿಸಿ ಅಡಗಿಸುವ ವಾಯು
ಅಡಗಿ ತೋರುವ ಬೆಡಗಿನಂತೆ,
ಪ್ರಾಣಲಿಂಗಿಯ ಅಂಗ.
ಅಂಗವಡಗಿದಲ್ಲಿ ವಾಯುವಿಂಗೆ ಭಂಗವೊ?
ಅಲ್ಲಾ, ನುಡಿದವರ ನುಡಿಗೆ ಭಂಗವೊ?
ಇದರ ತೊಡಕ ತಿಳಿದಾತನೆ ಮೃಡನು,
ಬಸವಪ್ರಿಯ ಕೂಡಲಚೆನ್ನಬಸವಣ್ಣ ಪ್ರಭುವೆ.
Art
Manuscript
Music
Courtesy:
Transliteration
Huḍiya hārisi aḍagisuva vāyu
aḍagi tōruva beḍaginante,
prāṇaliṅgiya aṅga.
Aṅgavaḍagidalli vāyuviṅge bhaṅgavo?
Allā, nuḍidavara nuḍige bhaṅgavo?
Idara toḍaka tiḷidātane mr̥ḍanu,
basavapriya kūḍalacennabasavaṇṇa prabhuve.